ಶುಕ್ರವಾರ, ಜೂನ್ 8, 2018

ಸ್ಕೂಲ್ ಮಾಸ್ಟರ್ : ಸ್ವಾಮಿದೇವನೆ ಲೋಕಪಾಲನೆ

ಹಾಡು: ಸ್ವಾಮಿದೇವನೆ ಲೋಕಪಾಲನೆ 
ಚಲನಚಿತ್ರ: ಸ್ಕೂಲ್ ಮಾಸ್ಟರ್ 
ಸಂಗೀತ ನಿರ್ದೇಶಕರು: ಟಿ. ಜಿ. ಲಿಂಗಪ್ಪ
ಕವಿ: ಸೋಸಲೆ ಅಯ್ಯಾ ಶಾಸ್ತ್ರಿಗಳು
ಹಾಡಿದವರು: ಟಿ. ಜಿ. ಲಿಂಗಪ್ಪ, ಎ.ಪಿ. ಕೋಮಲ,  ಕೆ. ರಾಣಿ
ಪಾತ್ರದಾರಿಗಳು: ಬಿ.ಆರ್. ಪಂತುಲು, ಉದಯಕುಮಾರ್, ಶಿವಾಜಿ ಗಣೇಶನ್, ಬಾಲಕೃಷ್ಣ, ನರಸಿಂಹರಾಜು, ಬಿ. ಸರೋಜಾದೇವಿ, ಜೆಮಿನಿ ಗಣೇಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು
ನಿರ್ಮಾಪಕರು: ಬಿ.ಆರ್. ಪಂತುಲು (ಪದ್ಮಿನಿ ಪಿಚ್ಚರ್ಸ್)
ಹಾಡು ಕೇಳಿ...

ಸ್ವಾಮಿದೇವನೆ ಲೋಕಪಾಲನೆ 
ತೇ ನಮೋಸ್ತು ನಮೋಸ್ತುತೇ |
ಪ್ರೇಮದಿಂದಲಿ ನೋಡು ನಮ್ಮನು 
ತೇ ನಮೋಸ್ತು ನಮೋಸ್ತುತೇ || ಪ ||

ದೇವ ದೇವನೆ ಹಸ್ತ ಪಾದ-
ಗಳಿಂದಲೂ ಮನದಿಂದಲೂ |
ನಾವು ಮಾಡಿದ ಪಾಪವೆಲ್ಲವ 
ಹೋಗಲಾಡಿಸು ಬೇಗನೆ || ೧ ||

ವಿಜಯ ವಿದ್ಯಾರಣ್ಯ ಕಟ್ಟಿದ 
ಚಾಮುಂಡಾಂಬೆಯ ನಾಡಿನ |
ಮನೆಯ ಮಕ್ಕಳ ಐಕ್ಯ ಗಾನವ
ಲಾಲಿಸಿ ಪರಿಪಾಲಿಸೈ || ೨ ||

Labels: Swami Devane Loka Palane, School Master, T.G. Lingappa, Kanagal Prabhakara Shastry, 1958, B.R. Pantulu, Udaya Kumar, Shivaji Ganeshan, Gemini Ganeshan, Balakrishna, Narasimharaju, B.R. Saroja Devi

ಸ್ಕೂಲ್ ಮಾಸ್ಟರ್ : ಭಾಮೆಯ ನೋಡಲು ತಾ ಬಂದ

ಹಾಡು: ಭಾಮೆಯ ನೋಡಲು ತಾ ಬಂದ
ಚಲನಚಿತ್ರ: ಸ್ಕೂಲ್ ಮಾಸ್ಟರ್ 
ಸಂಗೀತ ನಿರ್ದೇಶಕರು: ಟಿ. ಜಿ. ಲಿಂಗಪ್ಪ
ಕವಿ: ಚಿ. ಕಣಗಾಲ್ ಪ್ರಭಾಕರ ಶಾಸ್ತ್ರಿ
ಹಾಡಿದವರು: ಸೂಲಮಂಗಲಮ್ ಆರ್. ರಾಜಲಕ್ಷ್ಮಿ
ಪಾತ್ರದಾರಿಗಳು: ಬಿ.ಆರ್. ಪಂತುಲು, ಉದಯಕುಮಾರ್, ಶಿವಾಜಿ ಗಣೇಶನ್, ಬಾಲಕೃಷ್ಣ, ನರಸಿಂಹರಾಜು, ಬಿ. ಸರೋಜಾದೇವಿ, ಜೆಮಿನಿ ಗಣೇಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು
ನಿರ್ಮಾಪಕರು: ಬಿ.ಆರ್. ಪಂತುಲು (ಪದ್ಮಿನಿ ಪಿಚ್ಚರ್ಸ್)
ಹಾಡು ಕೇಳಿ...

ಭಾಮೆಯ ನೋಡಲು ತಾ ಬಂದ
ಬೃಂದಾವನದಿಂದ ಮುಕುಂದ
ಭಾಮೆಯ ನೋಡಲು ತಾ ಬಂದ || ಪ ||

ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದ || ೧ ||

ಬಾಗಿಲ ಮರೆಯಾಗಿ ನಾಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೇ ಜನಾರ್ದನ || ೨ ||

Labels: Bhameya Nodalu Taa Banda, School Master, T.G. Lingappa, Kanagal Prabhakara Shastry, 1958, B.R. Pantulu, Udaya Kumar, Shivaji Ganeshan, Gemini Ganeshan, Balakrishna, Narasimharaju, B.R. Saroja Devi