ಜಿ.ಕೆ. ವೆಂಕಟೇಶ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜಿ.ಕೆ. ವೆಂಕಟೇಶ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 4, 2014

ನೋಡಿ ಸ್ವಾಮಿ ನಾವಿರೋದು ಹೀಗೆ : ನೋಡಿ ಸ್ವಾಮಿ ನಾವಿರೋದು ಹೀಗೆ : Nodi Swami Navirode Heege

ಹಾಡು: ನೋಡಿ ಸ್ವಾಮಿ ನಾವಿರೋದು ಹೀಗೆ
ಚಲನಚಿತ್ರ: ನೋಡಿ ಸ್ವಾಮಿ ನಾವಿರೋದು ಹೀಗೆ
ಸಂಗೀತ ನಿರ್ದೇಶಕರು: ಜಿ.ಕೆ.ವೆಂಕಟೇಶ್
ಕವಿ: 
ಚಿ. ಉದಯಶಂಕರ್
ವರ್ಷ: 1983
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಪಾತ್ರದಾರಿಗಳು: ಶಂಕರ್ ನಾಗ್, ಅನಂತ್ ನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿ ನಾಗ್, ಲೋಕನಾಥ್, ಮಾ. ಮಂಜುನಾಥ್, ಉದಯಕುಮಾರ್
ಚಿತ್ರದ ನಿರ್ದೇಶಕರು: ಶಂಕರ್ ನಾಗ್

ನಿರ್ಮಾಪಕರು: ಗಾಯತ್ರಿ ಚಿತ್ರಾಲಯ (ರಮೇಶ್ ಭಟ್)
ಹಾಡು ಕೇಳಿ...

ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ, ನೋಡಿ ಸ್ವಾಮಿ ||ಪ||

ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಇಂದು ಏನು ಬೇಕು ಅದರ ಚಿಂತೆ ಸಾಕು; ಅಷ್ಟೆ
ಇಂದು ಏನು ಬೇಕು ಅದರ ಚಿಂತೆ ಸಾಕು
ಈ ಬದುಕು ಸಾಗೋ ರೀತಿ ಹೀಗೆ ||೧||

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು
ಯಾರು ಮಿತ್ರರಲ್ಲಾ ಯಾರು ಶತ್ರುವಲ್ಲ; ಅಷ್ಟೆ
ಯಾರು ಮಿತ್ರರಲ್ಲಾ ಯಾರು ಶತ್ರುವಲ್ಲ
ಈ ಬಗೆಯ ಬದುಕು ನಮದು ಎಂದೂ ||೨||

Labels: Nodi Swami Navirode Heege, Nodi Swami Navirode Heege, G.K. Venkatesh, Chi. Udayashankar, 1983, Shankar Nag, Anant Nag, Ramesh Bhat, Lakshmi, Ma. Manjunath, Udaya Kumar, Arundhati Nag, Lokanath

ಸೋಮವಾರ, ಸೆಪ್ಟೆಂಬರ್ 30, 2013

ಬಂಗಾರದ ಮನುಷ್ಯ : ಆಗದು ಎಂದು ಕೈಕಟ್ಟಿ ಕುಳಿತರೆ : Agadu Endu Kaikatti

ಹಾಡು: ಆಗದು ಎಂದು ಕೈಕಟ್ಟಿ ಕುಳಿತರೆ
ಚಲನಚಿತ್ರ: ಬಂಗಾರದ ಮನುಷ್ಯ
ಸಂಗೀತ ನಿರ್ದೇಶಕರು: ಜಿ.ಕೆ. ವೆಂಕಟೇಶ್
ಕವಿ:  ಆರ್.ಎನ್. ಜಯಗೋಪಾಲ್
ವರ್ಷ: 1972
ಹಾಡುಗಾರರು: ಡಾ|| ಪಿ.ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ವಜ್ರಮುನಿ, ದ್ವಾರಕೀಶ್, ಲೋಕನಾಥ್
ಚಿತ್ರದ ನಿರ್ದೇಶಕರು: ಸಿದ್ಧಲಿಂಗಯ್ಯ
ನಿರ್ಮಾಪಕರು: ಶ್ರೀನಿಧಿ ನಿರ್ಮಾಣ 

ಹಾಡು ಕೇಳಿ...

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಆಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ   ||ಪ||


ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು ||ಅ.ಪ||

ಕೆತ್ತಲಾದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ
ಆಗುತ್ತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು ||೧||

ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಅಹ ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು ||೨||

ಕೈಕೆಸರಾದೆರೆ ಬಾಯ್ಮೊಸರೆಂಬ ಹಿರಿಯರ
ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನಂಬಿ ಬದುಕು
ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು ||೩||


Agadu Endu Kaikatti Kulitare, Bangarada Manushya, G.K. Venkatesh, R.N. Jayagopal, 1972, P.B. Srinivas, Dr. Rajkumar, Bharathi, Balakrishna, Lokanath, Srinath, Vajramuni, Dwarakish

ಬಂಗಾರದ ಮನುಷ್ಯ : ನಗುನಗುತಾ ನಲಿ ನಲಿ : Nagunaguta Nali Nali

ಹಾಡು: ನಗುನಗುತಾ ನಲಿ ನಲಿ
ಚಲನಚಿತ್ರ: ಬಂಗಾರದ ಮನುಷ್ಯ
ಸಂಗೀತ ನಿರ್ದೇಶಕರು: ಜಿ. ಕೆ. ವೆಂಕಟೇಶ್
ಕವಿ: ಹುಣಸೂರು ಕೃಷ್ಣಮೂರ್ತಿ
ವರ್ಷ: 1972
ಹಾಡುಗಾರರು: ಡಾ|| ಪಿ.ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ವಜ್ರಮುನಿ, ದ್ವಾರಕೀಶ್, ಲೋಕನಾಥ್
ಚಿತ್ರದ ನಿರ್ದೇಶಕರು: ಸಿದ್ಧಲಿಂಗಯ್ಯ
ನಿರ್ಮಾಪಕರು: ಶ್ರೀನಿಧಿ ನಿರ್ಮಾಣ

ಹಾಡು ಕೇಳಿ...

ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ, ಏನೇ ಆಗಲಿ ||ಪ||

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲೂ ರಸದೌತಣ ನಿನಗೆಲ್ಲೆಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ  ||೧||

ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳದಾಗ ||೨||

ಗೆಳಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವದು
ಮುಂದೆ ಯೌವನ ಮದುವೆ ಬಂಧನ
ಎಲ್ಲೆಲು ಹೊಸ ಜೀವನ ಅಹ ಎಲ್ಲೆಲು ಹೊಸ ಜೀವನ
ಜೊತೆಯದು ದೊರೆತಾಗ
ಮೈಮನ ಮರೆತಾಗ  ||೩||

ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿನೋಡ ||೪||

Nagunaguta Nali Nali, Bangarada Manushya, G.K. Venkatesh, Hunasuru Krishnamurthy, 1972, P.B. Srinivas, Dr. Rajkumar, Bharathi, Balakrishna, Lokanath, Srinath, Vajramuni, Dwarakish