ಹಾಡು: ಜಯತೇ, ಜಯತೇ, ಜಯತೇ, ಸತ್ಯಮೇವ ಜಯತೇ
ಚಲನಚಿತ್ರ: ಕಲ್ಪವೃಕ್ಷ
ಸಂಗೀತ ನಿರ್ದೇಶಕರು: ಜಯದೇವ
ಕವಿ: ಕು. ರಾ. ಸೀತಾರಾಮಶಾಸ್ತ್ರಿ
ವರ್ಷ: 1969
ಹಾಡುಗಾರರು: ಮನ್ನಾ ಡೇ, ಅಂಬರ ಕುಮಾರ್, ಕೃಷ್ಣಾ ಕಲ್ಲೆ
ಪಾತ್ರದಾರಿಗಳು: ಉದಯಕುಮಾರ್, ಲೀಲಾವತಿ, ಶ್ರೀನಾಥ್, ಬಾಲಕೃಷ್ಣ, ಕೆ. ಎಸ್. ಅಶ್ವಥ್
ಚಿತ್ರದ ನಿರ್ದೇಶಕರು: ಕು. ರಾ. ಸೀತಾರಾಮಶಾಸ್ತ್ರಿ
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ
ಜಯತೇ, ಜಯತೇ, ಜಯತೇ
ಸತ್ಯಮೇವ ಜಯತೇ, ಸತ್ಯಮೇವ ಜಯತೇ, ಸತ್ಯಮೇವ ಜಯತೇ ।।ಪ।।
ಬೇವ ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ, ಸೋಲೇ ಕಾಣದಂತೆ ||೧||
ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ, ಸೋಲೇ ಕಾಣದಂತೆ ||೨||
ಮಧುರ ಭಾವ ತುಂಬಿದಂತ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ
ಸರಳ ಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ
ಸತ್ಯವಾದ ಘನತೆ, ಸೋಲೇ ಕಾಣದಂತೆ ||೩||
ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲೆ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ, ಸೋಲೇ ಕಾಣದಂತೆ ||೪||
Jayate Satyameva Jayate, Kalpavriksha, Jayadeva, Ku.Ra. Seetarama Shastri, 1969, Manna De, Udayakumar, Leelavathi, Srinath, Balakrishna, K.S. Ashwath

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ