ಹಾಡು: ಆ ಕರ್ಣನಂತೆ ನೀ ದಾನಿಯಾದೆ
ಚಲನಚಿತ್ರ: ಕರ್ಣ
ಸಂಗೀತ ನಿರ್ದೇಶಕರು: ಎಂ. ರಂಗರಾವ್
ಕವಿ: ಚಿ.ಉದಯಶಂಕರ್
ವರ್ಷ: 1986
ಹಾಡುಗಾರರು: ಕೆ. ಜೆ. ಯೇಸುದಾಸ್
ಪಾತ್ರದಾರಿಗಳು: ವಿಷ್ಣುವರ್ಧನ್, ಸುಮಲತಾ, ಕೆ.ಎಸ್. ಆಶ್ವಥ್, ಅವಿನಾಶ್
ಚಿತ್ರದ ನಿರ್ದೇಶಕರು: ಭಾರ್ಗವ
ನಿರ್ಮಾಪಕರು: ಅಮೃತ ಕಲಾ
ಹಾಡು ಕೇಳಿ...
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ ||ಪ||
ಚಲನಚಿತ್ರ: ಕರ್ಣ
ಸಂಗೀತ ನಿರ್ದೇಶಕರು: ಎಂ. ರಂಗರಾವ್
ಕವಿ: ಚಿ.ಉದಯಶಂಕರ್
ವರ್ಷ: 1986
ಹಾಡುಗಾರರು: ಕೆ. ಜೆ. ಯೇಸುದಾಸ್
ಪಾತ್ರದಾರಿಗಳು: ವಿಷ್ಣುವರ್ಧನ್, ಸುಮಲತಾ, ಕೆ.ಎಸ್. ಆಶ್ವಥ್, ಅವಿನಾಶ್
ಚಿತ್ರದ ನಿರ್ದೇಶಕರು: ಭಾರ್ಗವ
ನಿರ್ಮಾಪಕರು: ಅಮೃತ ಕಲಾ
ಹಾಡು ಕೇಳಿ...
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ ||ಪ||
ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ನಿನ್ನಂತ ರಂಗವಾ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು ||೧||
ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು
ಏನಾದರೇನೀಗಾ ನಿನ್ನನ್ನು ಮರೆಯರು ||೨||
ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು ||೩||
Labels: Aa Karnanante Nee Daniyade, Karna, M. Ranga Rao, Chi. Udayashankar, 1986, Vishnuvardhan, Sumalata, K.S. Aswath, Avinash
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಹಾಡು ಸೊಗಸಾಗಿದೆ .... ಆದರೆ " ಆ ಕರ್ನನಂತೇ " ಎಂದು ಕೇಳಲು ಸ್ವಲ್ಪ ಹಿಂಸೆಯಾಗುತ್ತದೆ !
ಪ್ರತ್ಯುತ್ತರಅಳಿಸಿ[ ನಿಮ್ಮ ಪ್ರೊಫೈಲ್ ನಲ್ಲಿರುವ 'ನೆಚ್ಚಿನ ಪುಸ್ತಕಗಳ' ಪಟ್ಟಿಯಲ್ಲಿರುವ "ಗರ್ವ ಭಂಗ " ವನ್ನು " ಗೃಹ ಭಂಗ " ಮಾಡುತ್ತೀರಾ ?! ]
ಧನ್ಯವಾದ. ಬದಲಾಯಿಸಿದ್ದೇನೆ.
ಅಳಿಸಿನಿಜ, ಕನ್ನಡೇತರರು ಹಾಡಿರುವ ಕೆಲವು ಹಾಡುಗಳು ಈ ರೀತಿಯ ಆಭಾಸವನ್ನುಂಟು ಮಾಡುತ್ತವೆ. ಇದೆ ರೀತಿ ಪಂಕಜ್ ಉದಾಸ್ ರವರು ಸ್ಪರ್ಶ ಚಿತ್ರದಲ್ಲಿ ಹಾಡಿದ ಚೆಂದಕಿಂತ ಚೆಂದ... ಹಾಡೂ ಕೂಡ.