ಸೋಮವಾರ, ನವೆಂಬರ್ 11, 2013

ಜಿಮ್ಮಿಗಲ್ಲು : ತುತ್ತು ಅನ್ನ ತಿನ್ನೋಕೆ : Tuttu Anna Tinnoke

ಹಾಡು: ತುತ್ತು ಅನ್ನ ತಿನ್ನೋಕೆ
ಚಲನಚಿತ್ರ: ಜಿಮ್ಮಿಗಲ್ಲು
ಸಂಗೀತ ನಿರ್ದೇಶಕರು: ವಿಜಯಭಾಸ್ಕರ್
ಕವಿ: ಚಿ.ಉದಯಶಂಕರ್
ವರ್ಷ: 1982
ಹಾಡುಗಾರರು: ವಿಷ್ಣುವರ್ಧನ್

ಪಾತ್ರದಾರಿಗಳು: ವಿಷ್ಣುವರ್ಧನ್, ಶ್ರೀಪ್ರಿಯಾ, ಸುಂದರಕೃಷ್ಣ ಅರಸ್
ಚಿತ್ರದ ನಿರ್ದೇಶಕರು: ಕೆ.ಎಸ್.ಎಲ್. ಸ್ವಾಮಿ (ರವಿ)
ನಿರ್ಮಾಪಕರು: ನವನಿಧಿ ಚಿತ್ರ

ಹಾಡು ಕೇಳಿ...

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ    ||ಪ|| 
 

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು

ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು    ||೧|| 

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು

ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ  ||೨|| 

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ

ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ   ||೩||  

Labels:  Tuttu Anna Tinnoke, Jimmy Gallu, Vijaya Bhaskar, Chi. Udayashankar, 1982, Vishnuvardhan, Sripriya, Sundarakrishna Urs

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ