ರಾಜನ್-ನಾಗೇಂದ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜನ್-ನಾಗೇಂದ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 4, 2014

ಮುನಿಯನ ಮಾದರಿ : ಇಂದಿಗಿಂತ ಅಂದೇನೆ ಚೆಂದವು : Indiginta Andene Chendavu

ಹಾಡು: ಇಂದಿಗಿಂತ ಅಂದೇನೆ ಚೆಂದವು 
ಚಲನಚಿತ್ರ: ಮುನಿಯನ ಮಾದರಿ 
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್

ವರ್ಷ: 1981
ಹಾಡುಗಾರರು: ಕೆ.ಜೆ. ಯೇಸುದಾಸ್
ಪಾತ್ರದಾರಿಗಳು: ಶಂಕರ್ ನಾಗ್, ಜೈ ಜಗದೀಶ್, ಜಯಮಾಲ, ಕೋಕಿಲಾ ಮೋಹನ್, ಅಶ್ವಥ್, ಲೀಲಾವತಿ
ಚಿತ್ರದ ನಿರ್ದೇಶಕರು: ದೊರೈ-ಭಗವಾನ್

ನಿರ್ಮಾಪಕರು: ಅನುಪಮಾ ಆರ್ಟ್ ಕಂಬೈನ್ಸ್
ಹಾಡು ಕೇಳಿ...


ಇಂದಿಗಿಂತ ಅಂದೇನೆ ಚೆಂದವು 
ಎಂಥ ಸೊಗಸು ಆ ನಮ್ಮ ಕಾಲವು 
ಅಂಥ ವಯಸು ಅಂಥ ಮನಸು 
ಬಾರದು ಬಯಸಲು, ದೊರಕದು ಬೇಡಲು 
ಆಡಿದ ತುಂಟಾಟ ನೋಡಿದ ಆ ನೋಟ 
ಹಗಲು ಇರುಳು ಚೆಲ್ಲಾಟವು ||ಪ||

ಯಾರೆ ಬರಲಿ ಯಾರೆ ಇರಲಿ 
ನಮ್ಮ ಮಾತೆ ನಮ್ಮದು 
ಕಲ್ಲು ಮುಳ್ಳೇನು ಚಳಿ ಗಾಳಿ ಮಳೇಯೇನು 
ನಮ್ಮ ತಡೆಯೋರು ಯಾರು 
ತೋಟ ನಮದು ಬಾವಿ ನಮದು 
ಊರು ಕೇರಿ ನಮ್ಮದು 
ಮೀನು ನೀರಲ್ಲಿ ಮರ ಕೋತಿ ಮರದಲ್ಲಿ 
ಏನು ಆ ನಮ್ಮ ಜೋರು 
ಅಂದು ಯಾರಿಲ್ಲ ನಮ್ಮನು ಹಿಡಿಯೋರು ||೧||

ಅಂದು ಕಂಡ ಸಲಿಗೆ ಸರಸ 
ಇಂದು ಎಲ್ಲಿ ಹೋಯಿತು 
ಸ್ನೇಹ ಏನಾಯ್ತು ಆ ಪ್ರೀತಿ ಏನಾಯ್ತು 
ಏಕೆ ಸಂಕೋಚ ಬಂತು 
ಹಳ್ಳ ದಿಣ್ಣೆ ಬೇರೆ ತಾನೆ 
ಎಂದು ಒಂದೆ ಆಗದು 
ಅನ್ನ ಹಾಕೋರು ನನ್ನ ನೀವು ಸಾಕೊರು 
ಸಲಿಗೆ ನಮಗೀಗ ಒಪ್ಪದು 
ಇಂಥ ಮಾತನ್ನು ಕೇಳೆನು ನಾನಿನ್ನು ||೨||

Labels: Indiginta Andene Chendavu, Muniyana Madari, Rajan-Nagendra, Chi. Udayashankar,  1981, Shankar Nag, Jai Jagadish, Jayamala, Ashwath, Kokila Mohan, Leelavati

ಬುಧವಾರ, ಅಕ್ಟೋಬರ್ 30, 2013

ಗಿರಿಕನ್ಯೆ : ಏನೆಂದೂ ನಾ ಹೇಳಲಿ : Enendu Naa Hadali

ಹಾಡು: ಏನೆಂದೂ ನಾ ಹೇಳಲಿ
ಚಲನಚಿತ್ರ: ಗಿರಿಕನ್ಯೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ.ಉದಯಶಂಕರ್
ವರ್ಷ: 1977
ಹಾಡುಗಾರರು: ಡಾ|| ರಾಜಕುಮಾರ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಮಾಲ, ಸಂಪತ್, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ...


ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ ||೧||

ಜೇನುಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ
ಹನಿಹನಿ ಜೇನು ಸೇರಿಸಲೇನು
ಬೇಕು ಎಂದಾಗ ತನದೆನ್ನುವ ||೨||

ಕೆಸರಿನ ಹೂವು, ವಿಷದ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲಾ
ಚೆಲುವಿನದೆಲ್ಲಾ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವಾ ||೩||

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ ||೪||

ನುಡಿಯುವುದೊಂದು ನಡೆಯುವುದೊಂದು
ಎಂದೆಂದು ಎಂದೆಂದು ಎಂದೆಂದೂ
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗಿ ಮೆರೆದಾಡುವ ||೫||


Enendu Naa Hadali, Girikanye, Rajan-Nagendra, Chi.Udayashankar, 1977, Dr. Rajkumar, Jayamala, Vajramuni, Sampath, Prabhakar, Toogudeepa Srinivas