ಶುಕ್ರವಾರ, ಜುಲೈ 4, 2014

ನೋಡಿ ಸ್ವಾಮಿ ನಾವಿರೋದು ಹೀಗೆ : ನೋಡಿ ಸ್ವಾಮಿ ನಾವಿರೋದು ಹೀಗೆ : Nodi Swami Navirode Heege

ಹಾಡು: ನೋಡಿ ಸ್ವಾಮಿ ನಾವಿರೋದು ಹೀಗೆ
ಚಲನಚಿತ್ರ: ನೋಡಿ ಸ್ವಾಮಿ ನಾವಿರೋದು ಹೀಗೆ
ಸಂಗೀತ ನಿರ್ದೇಶಕರು: ಜಿ.ಕೆ.ವೆಂಕಟೇಶ್
ಕವಿ: 
ಚಿ. ಉದಯಶಂಕರ್
ವರ್ಷ: 1983
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಪಾತ್ರದಾರಿಗಳು: ಶಂಕರ್ ನಾಗ್, ಅನಂತ್ ನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿ ನಾಗ್, ಲೋಕನಾಥ್, ಮಾ. ಮಂಜುನಾಥ್, ಉದಯಕುಮಾರ್
ಚಿತ್ರದ ನಿರ್ದೇಶಕರು: ಶಂಕರ್ ನಾಗ್

ನಿರ್ಮಾಪಕರು: ಗಾಯತ್ರಿ ಚಿತ್ರಾಲಯ (ರಮೇಶ್ ಭಟ್)
ಹಾಡು ಕೇಳಿ...

ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ, ನೋಡಿ ಸ್ವಾಮಿ ||ಪ||

ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಇಂದು ಏನು ಬೇಕು ಅದರ ಚಿಂತೆ ಸಾಕು; ಅಷ್ಟೆ
ಇಂದು ಏನು ಬೇಕು ಅದರ ಚಿಂತೆ ಸಾಕು
ಈ ಬದುಕು ಸಾಗೋ ರೀತಿ ಹೀಗೆ ||೧||

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು
ಯಾರು ಮಿತ್ರರಲ್ಲಾ ಯಾರು ಶತ್ರುವಲ್ಲ; ಅಷ್ಟೆ
ಯಾರು ಮಿತ್ರರಲ್ಲಾ ಯಾರು ಶತ್ರುವಲ್ಲ
ಈ ಬಗೆಯ ಬದುಕು ನಮದು ಎಂದೂ ||೨||

Labels: Nodi Swami Navirode Heege, Nodi Swami Navirode Heege, G.K. Venkatesh, Chi. Udayashankar, 1983, Shankar Nag, Anant Nag, Ramesh Bhat, Lakshmi, Ma. Manjunath, Udaya Kumar, Arundhati Nag, Lokanath

ಪಾಪ ಪುಣ್ಯ : ಗೀಯ ಗೀಯ ನಾವು ಬಂದೇವ : Geeya Geeya Naavu Bandeva

ಹಾಡು: ಗೀಯ ಗೀಯ ನಾವು ಬಂದೇವ
ಚಲನಚಿತ್ರ: ಪಾಪ ಪುಣ್ಯ
ಸಂಗೀತ ನಿರ್ದೇಶಕರು: ಪದ್ಮಚರಣ್
ಕವಿ: ಮಹಾದೇವ ಬಣಕಾರ್

ವರ್ಷ: 1971
ಹಾಡುಗಾರರು: 
ಪೀತಾಪೂರಂ ನಾಗೇಶ್ವರ ರಾವ್
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಬಿ. ಸರೋಜಾದೇವಿ, ಅಶ್ವಥ್, ಆದಿವಾನಿ ಲಕ್ಷ್ಮೀದೇವಿ, ಅನಂತರಾಮ್ ಮಚ್ಚೇರಿ
ಚಿತ್ರದ ನಿರ್ದೇಶಕರು: ಎಂ.ವಿ. ಕೃಷ್ಣಸ್ವಾಮಿ

ನಿರ್ಮಾಪಕರು: ಗೋಪಾಲ್ ಫಿಲಂಸ್ (ಡಿ. ರಾಜಗೋಪಾಲ್)
ಹಾಡು ಕೇಳಿ...

ಹರ ಹರಾ..ಆ..ರಾ 
ಅರೆ ಗೀಯ ಗೀಯ ಗಾ ಗಿಯ ಗೀಯಾ 
ಗೀಯ ಗೀಯ ಗಾ ಗಿಯ ಗೀಯ 
ನಾವು ಬಂದೇವ ನಾವು ಬಂದೇವ 
ನಾವು ಬಂದೇವ ಶ್ರೀ ಶೈಲ ನೋಡೊದಕ್ಕ 
ಸ್ವಾಮಿ ಸೇವ ಮಾಡಿ ಮತ್ತು ಹೋಗದಕ್ಕ 
ಅರೆ ಗೀಯ ಗೀಯ ಗಾ ಗಿಯ ಗೀಯಾ ||ಪ||

ಹೇಯ್ ಬೆಟ್ಟದ ಮೇಲೆ ಏರಿ ಶಿವ ಯಾಕೆ ಕುಂತ 
ಅವನಿಗೇನು ಬಂತ ಅಂತ್ತಾದ್ ಅವನಿಗೇನು ಬಂತ 
ಹೂ ಹೇಳಪ್ಪ 
ಕೆಟ್ಟ ಜನರ ಮುಖ ನೋಡಬಾರದಂತ 
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ 
ಗೀಯ ಗೀಯ ಗಾ ಗಿಯ ಗೀಯ ||೧||

ಹೇಯ್ ಹಣ್ಣು ಕಾಯಿ ಧೂಪ ದೀಪ ಇಡತಾರಂತ 
ಯಾಕಂತ ಪುಣ್ಯ ಬರಲಿ ಅಂತ ಪುಣ್ಯ ಬರಲಿ ಅಂತ 
ಕಾಸಿನೊಳಗ ಕೋಟಿ ಪುಣ್ಯ ಬರಲಿ ಅಂತಾ 
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ 
ಗೀಯ ಗೀಯ ಗಾ ಗಿಯ ಗೀಯ ||೨||

ಹೇಯ್ ಭಿಕ್ಷುಕ ಬಂದರೆ ನಿಷ್ಟೂರವಾಗಿ ಹೇಳ್ತಾರಂತ 
ಏನಂತ 
ಮುಂದಕ್ಕ ಹೋಗಂತ ಈಗಾಗೊದಿಲ್ಲ ಮುಂದಕ್ಕ ಹೋಗಂತ 
ಬೆಟ್ಟ ಏರಿ ಬಂದಿದ್ರು ಕೆಟ್ಟ್ ಗುಣ ಹೋಗಲಿಲ್ಲ 
ಹುಟ್ಟು ಗುಣ ಸುಟ್ಟಾರು ಹೋಗದಂತಾ 
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ 
ಗೀಯ ಗೀಯ ||೩|| 

ಹೇಯ್ ಬಾಯಿ ಇದ್ರು ಮೂಕನಾಗಿ 
ಕಿವಿ ಇದ್ರು ಕಿವುಡನಾಗಿ ಸಿವ ಯಾಕೆ ಕುಂತ 
ಹೇಳಪ್ಪ 
ವರ ಕೇಳತಾರಂತ 
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ 
ಗೀಯ ಗೀಯ ||೪||

ಹೇ ಶಿವನ ಒಲಿಸದಕ್ಕ ಏನು ಮಾಡಬೇಕ 
ಹೂ ಹೇಳಪ್ಪ 
ಭಕ್ತಿಯೊಂದು ಸಾಕ ನಮ್ಮಿಂದ ಶಿವನಿಗೇನು ಬೇಕಾ 
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ 
ಗೀಯ ಗೀಯ ||೫||

Labels: Geeya Geeya Naavu Bandeva, Paapa Punya, Mahadeva Banakar, 1971, Kalyan Kumar, B. Sarojadevi, Ashwath, Adivani Lakshmidevi, Anantaram Machcheri

ಮುನಿಯನ ಮಾದರಿ : ಇಂದಿಗಿಂತ ಅಂದೇನೆ ಚೆಂದವು : Indiginta Andene Chendavu

ಹಾಡು: ಇಂದಿಗಿಂತ ಅಂದೇನೆ ಚೆಂದವು 
ಚಲನಚಿತ್ರ: ಮುನಿಯನ ಮಾದರಿ 
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್

ವರ್ಷ: 1981
ಹಾಡುಗಾರರು: ಕೆ.ಜೆ. ಯೇಸುದಾಸ್
ಪಾತ್ರದಾರಿಗಳು: ಶಂಕರ್ ನಾಗ್, ಜೈ ಜಗದೀಶ್, ಜಯಮಾಲ, ಕೋಕಿಲಾ ಮೋಹನ್, ಅಶ್ವಥ್, ಲೀಲಾವತಿ
ಚಿತ್ರದ ನಿರ್ದೇಶಕರು: ದೊರೈ-ಭಗವಾನ್

ನಿರ್ಮಾಪಕರು: ಅನುಪಮಾ ಆರ್ಟ್ ಕಂಬೈನ್ಸ್
ಹಾಡು ಕೇಳಿ...


ಇಂದಿಗಿಂತ ಅಂದೇನೆ ಚೆಂದವು 
ಎಂಥ ಸೊಗಸು ಆ ನಮ್ಮ ಕಾಲವು 
ಅಂಥ ವಯಸು ಅಂಥ ಮನಸು 
ಬಾರದು ಬಯಸಲು, ದೊರಕದು ಬೇಡಲು 
ಆಡಿದ ತುಂಟಾಟ ನೋಡಿದ ಆ ನೋಟ 
ಹಗಲು ಇರುಳು ಚೆಲ್ಲಾಟವು ||ಪ||

ಯಾರೆ ಬರಲಿ ಯಾರೆ ಇರಲಿ 
ನಮ್ಮ ಮಾತೆ ನಮ್ಮದು 
ಕಲ್ಲು ಮುಳ್ಳೇನು ಚಳಿ ಗಾಳಿ ಮಳೇಯೇನು 
ನಮ್ಮ ತಡೆಯೋರು ಯಾರು 
ತೋಟ ನಮದು ಬಾವಿ ನಮದು 
ಊರು ಕೇರಿ ನಮ್ಮದು 
ಮೀನು ನೀರಲ್ಲಿ ಮರ ಕೋತಿ ಮರದಲ್ಲಿ 
ಏನು ಆ ನಮ್ಮ ಜೋರು 
ಅಂದು ಯಾರಿಲ್ಲ ನಮ್ಮನು ಹಿಡಿಯೋರು ||೧||

ಅಂದು ಕಂಡ ಸಲಿಗೆ ಸರಸ 
ಇಂದು ಎಲ್ಲಿ ಹೋಯಿತು 
ಸ್ನೇಹ ಏನಾಯ್ತು ಆ ಪ್ರೀತಿ ಏನಾಯ್ತು 
ಏಕೆ ಸಂಕೋಚ ಬಂತು 
ಹಳ್ಳ ದಿಣ್ಣೆ ಬೇರೆ ತಾನೆ 
ಎಂದು ಒಂದೆ ಆಗದು 
ಅನ್ನ ಹಾಕೋರು ನನ್ನ ನೀವು ಸಾಕೊರು 
ಸಲಿಗೆ ನಮಗೀಗ ಒಪ್ಪದು 
ಇಂಥ ಮಾತನ್ನು ಕೇಳೆನು ನಾನಿನ್ನು ||೨||

Labels: Indiginta Andene Chendavu, Muniyana Madari, Rajan-Nagendra, Chi. Udayashankar,  1981, Shankar Nag, Jai Jagadish, Jayamala, Ashwath, Kokila Mohan, Leelavati