ಸೋಮವಾರ, ನವೆಂಬರ್ 11, 2013

ಬೆಟ್ಟದ ಹುಲಿ : ಆಡುತಿರುವಾ ಮೋಡಗಳೇ : Adutirava Modagale

ಹಾಡು: ಆಡುತಿರುವಾ ಮೋಡಗಳೇ  
ಚಲನಚಿತ್ರ: ಬೆಟ್ಟದ ಹುಲಿ 
ಸಂಗೀತ ನಿರ್ದೇಶಕರು: ಟಿ.ಜಿ.ಲಿಂಗಪ್ಪ
ಕವಿ: ಮುಜಾಫರ್ ಶಹಜಹಾನ್ ಪುರಿ

ವರ್ಷ: 1965
ಹಾಡುಗಾರರು: ಪಿ. ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಂತಿ, ಉದಯಕುಮಾರ್, ಎಂ.ಪಿ. ಶಂಕರ್
ಚಿತ್ರದ ನಿರ್ದೇಶಕರು: ಎ.ವಿ.ಶೇಷಗಿರಿರಾವ್ 

ನಿರ್ಮಾಪಕರು: ಭಗವತಿ ನಿರ್ಮಾಣ
ಹಾಡು ಕೇಳಿ...

ಆಡುತಿರುವಾ ಮೋಡಗಳೇ ಹಾರುತಿರುವಾ ಹಕ್ಕಿಗಳೇ
ಯಾರ ತಡೆಯೂ ನಿಮಗಿಲ್ಲಾ ನಿಮ್ಮ ಭಾಗ್ಯ ನಮಗಿಲ್ಲಾ    ||ಪ||   

ಒಬ್ಬನು ತನ್ನಯ ಸಲುವಾಗಿ ಹಲವರ ದೋಚಿ ನಗುವಾಂತಾ
ಒಬ್ಬನೆಲ್ಲೋ ನಗುತಿರಲು ಕೋಟಿ ಮಂದಿ ಅಳುವಂತಾ
ಲೋಕವಿದುವಂತೆ ಹೋಯ್ ಪಾಪದಾ ಸಂತೆ
ಪ್ರೀತಿಯಲ್ಲಿ ನೀತಿಯೆಲ್ಲಿ ಶಾಂತಿಯು ಎಲ್ಲಿದೆ ಜಗದಲ್ಲಿ    ||೧||

ಮನುಜರು ಮನುಜರ ದಾರಿಯಲಿ ಮುಳ್ಳನು ಹಾಸಿ ಮೆರೆಯುವರು
ಆಸೆಯಿಂದ ಮನೆಕಟ್ಟಿ ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟ ಹೊಯ್ ಜೀವ ಜಂಜಾಟ 
ಭೇಧ ಭಾವ ಆಳುತಿರುವಾ ಲೋಕದ ನ್ಯಾಯದ ನೆರಳಲ್ಲಿ   ||೨||

Labels: Adutirava Modagale, Bettada Huli, T.G. Lingappa, Muzaffar Shahajahan Puri, 1965, Dr. Rajkumar, Jayanti, Udayakumar, M.P. Shankar

ಕರ್ಣ : ಆ ಕರ್ಣನಂತೆ ನೀ ದಾನಿಯಾದೆ : Aa Karnanante Nee Daniyade

ಹಾಡು: ಆ ಕರ್ಣನಂತೆ ನೀ ದಾನಿಯಾದೆ
ಚಲನಚಿತ್ರ: ಕರ್ಣ
ಸಂಗೀತ ನಿರ್ದೇಶಕರು: ಎಂ. ರಂಗರಾವ್
ಕವಿ: ಚಿ.ಉದಯಶಂಕರ್
ವರ್ಷ: 1986
ಹಾಡುಗಾರರು: ಕೆ. ಜೆ. ಯೇಸುದಾಸ್
ಪಾತ್ರದಾರಿಗಳು: ವಿಷ್ಣುವರ್ಧನ್, ಸುಮಲತಾ, ಕೆ.ಎಸ್. ಆಶ್ವಥ್, ಅವಿನಾಶ್
ಚಿತ್ರದ ನಿರ್ದೇಶಕರು: ಭಾರ್ಗವ
ನಿರ್ಮಾಪಕರು: ಅಮೃತ ಕಲಾ 

ಹಾಡು ಕೇಳಿ...

ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ    ||ಪ|| 

ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ನಿನ್ನಂತ ರಂಗವಾ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು  ||೧||

ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು
ಏನಾದರೇನೀಗಾ  ನಿನ್ನನ್ನು ಮರೆಯರು    ||೨||

ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ 
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು   ||೩||
Labels: Aa Karnanante Nee Daniyade, Karna, M. Ranga Rao, Chi. Udayashankar, 1986, Vishnuvardhan, Sumalata, K.S. Aswath, Avinash

ಜಿಮ್ಮಿಗಲ್ಲು : ತುತ್ತು ಅನ್ನ ತಿನ್ನೋಕೆ : Tuttu Anna Tinnoke

ಹಾಡು: ತುತ್ತು ಅನ್ನ ತಿನ್ನೋಕೆ
ಚಲನಚಿತ್ರ: ಜಿಮ್ಮಿಗಲ್ಲು
ಸಂಗೀತ ನಿರ್ದೇಶಕರು: ವಿಜಯಭಾಸ್ಕರ್
ಕವಿ: ಚಿ.ಉದಯಶಂಕರ್
ವರ್ಷ: 1982
ಹಾಡುಗಾರರು: ವಿಷ್ಣುವರ್ಧನ್

ಪಾತ್ರದಾರಿಗಳು: ವಿಷ್ಣುವರ್ಧನ್, ಶ್ರೀಪ್ರಿಯಾ, ಸುಂದರಕೃಷ್ಣ ಅರಸ್
ಚಿತ್ರದ ನಿರ್ದೇಶಕರು: ಕೆ.ಎಸ್.ಎಲ್. ಸ್ವಾಮಿ (ರವಿ)
ನಿರ್ಮಾಪಕರು: ನವನಿಧಿ ಚಿತ್ರ

ಹಾಡು ಕೇಳಿ...

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ    ||ಪ|| 
 

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು

ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು    ||೧|| 

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು

ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ  ||೨|| 

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ

ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ   ||೩||  

Labels:  Tuttu Anna Tinnoke, Jimmy Gallu, Vijaya Bhaskar, Chi. Udayashankar, 1982, Vishnuvardhan, Sripriya, Sundarakrishna Urs

ಬುಧವಾರ, ಅಕ್ಟೋಬರ್ 30, 2013

ಗಿರಿಕನ್ಯೆ : ಏನೆಂದೂ ನಾ ಹೇಳಲಿ : Enendu Naa Hadali

ಹಾಡು: ಏನೆಂದೂ ನಾ ಹೇಳಲಿ
ಚಲನಚಿತ್ರ: ಗಿರಿಕನ್ಯೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ.ಉದಯಶಂಕರ್
ವರ್ಷ: 1977
ಹಾಡುಗಾರರು: ಡಾ|| ರಾಜಕುಮಾರ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಮಾಲ, ಸಂಪತ್, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ...


ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ ||೧||

ಜೇನುಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ
ಹನಿಹನಿ ಜೇನು ಸೇರಿಸಲೇನು
ಬೇಕು ಎಂದಾಗ ತನದೆನ್ನುವ ||೨||

ಕೆಸರಿನ ಹೂವು, ವಿಷದ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲಾ
ಚೆಲುವಿನದೆಲ್ಲಾ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವಾ ||೩||

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ ||೪||

ನುಡಿಯುವುದೊಂದು ನಡೆಯುವುದೊಂದು
ಎಂದೆಂದು ಎಂದೆಂದು ಎಂದೆಂದೂ
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗಿ ಮೆರೆದಾಡುವ ||೫||


Enendu Naa Hadali, Girikanye, Rajan-Nagendra, Chi.Udayashankar, 1977, Dr. Rajkumar, Jayamala, Vajramuni, Sampath, Prabhakar, Toogudeepa Srinivas

ಕಲ್ಪವೃಕ್ಷ : ಜಯತೇ, ಸತ್ಯಮೇವ ಜಯತೇ : Jayate Satyameva Jayate

ಹಾಡು: ಜಯತೇ, ಜಯತೇ, ಜಯತೇ, ಸತ್ಯಮೇವ ಜಯತೇ
ಚಲನಚಿತ್ರ: ಕಲ್ಪವೃಕ್ಷ
ಸಂಗೀತ ನಿರ್ದೇಶಕರು: ಜಯದೇವ
ಕವಿ: ಕು. ರಾ. ಸೀತಾರಾಮಶಾಸ್ತ್ರಿ
ವರ್ಷ: 1969
ಹಾಡುಗಾರರು: ಮನ್ನಾ ಡೇ, ಅಂಬರ ಕುಮಾರ್, ಕೃಷ್ಣಾ ಕಲ್ಲೆ
ಪಾತ್ರದಾರಿಗಳು: ಉದಯಕುಮಾರ್, ಲೀಲಾವತಿ, ಶ್ರೀನಾಥ್, ಬಾಲಕೃಷ್ಣ, ಕೆ. ಎಸ್. ಅಶ್ವಥ್
ಚಿತ್ರದ ನಿರ್ದೇಶಕರು: ಕು. ರಾ. ಸೀತಾರಾಮಶಾಸ್ತ್ರಿ
ನಿರ್ಮಾಪಕರು: ಭಾವನಾ ನಿರ್ಮಾಣ

ಹಾಡು ಕೇಳಿ 

ಜಯತೇ, ಜಯತೇ, ಜಯತೇ
ಸತ್ಯಮೇವ ಜಯತೇ, ಸತ್ಯಮೇವ ಜಯತೇ, ಸತ್ಯಮೇವ ಜಯತೇ ।।ಪ।।

ಬೇವ ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೧||

ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೨||

ಮಧುರ ಭಾವ ತುಂಬಿದಂತ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ
ಸರಳ ಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೩||

ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲೆ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೪||


Jayate Satyameva Jayate, Kalpavriksha, Jayadeva, Ku.Ra. Seetarama Shastri, 1969, Manna De, Udayakumar, Leelavathi, Srinath, Balakrishna, K.S. Ashwath

ಸೋಮವಾರ, ಸೆಪ್ಟೆಂಬರ್ 30, 2013

ಆಪ್ತಮಿತ್ರ : ಕಣಕಣದೆ ಶಾರದೆ : Kanakanade Sharade

ಹಾಡು: ಕಣಕಣದೆ ಶಾರದೆ
ಚಲನಚಿತ್ರ: ಆಪ್ತಮಿತ್ರ
ಸಂಗೀತ ನಿರ್ದೇಶಕರು: ಗುರುಕಿರಣ್
ಕವಿ: ಕವಿರಾಜ್
ವರ್ಷ: 2004
ಹಾಡುಗಾರರು: ಮಧು ಬಾಲಕೃಷ್ಣನ್
ಪಾತ್ರದಾರಿಗಳು: ಡಾ|| ವಿಷ್ಣುವರ್ಧನ್, ರಮೇಶ್, ಅವಿನಾಶ್, ಸೌಂದರ್ಯ, ಪ್ರೇಮ
ಚಿತ್ರದ ನಿರ್ದೇಶಕರು: ಪಿ. ವಾಸು
ನಿರ್ಮಾಪಕರು: ದ್ವಾರಕೀಶ್ ಚಿತ್ರ

ಹಾಡು ಕೇಳಿ...

ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹುಕುಹು ಗಾನ
ಝರಿಝರಿಯಲ್ಲೂ ಝುಳುಝುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು ||ಪ||

ಜನನಕು ಹಾಡು ಮರಣಕು ಹಾಡು ಲಾಲಿ ಚರಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು ಬರುವುದು ಶ್ರುತಿ ಲಯವು ||೧||

ಕುಲನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರಿಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗಾ ಮಪಮಪಗಾ
ನಿಪಮಪನಿ ಸನಿಪನಿಸ ಗಸನಿಸಗಾ ಆ ಆ ಆ ಆ  ||೨||


Kanakanade Sharade, Aptamitra, Gurukiran, Kaviraj, 2004, Madhu Balakrishnan, Dr. Vishnuvardhan, Soundarya, Ramesh, Prema, Avinash

ಬಂಗಾರದ ಮನುಷ್ಯ : ಆಗದು ಎಂದು ಕೈಕಟ್ಟಿ ಕುಳಿತರೆ : Agadu Endu Kaikatti

ಹಾಡು: ಆಗದು ಎಂದು ಕೈಕಟ್ಟಿ ಕುಳಿತರೆ
ಚಲನಚಿತ್ರ: ಬಂಗಾರದ ಮನುಷ್ಯ
ಸಂಗೀತ ನಿರ್ದೇಶಕರು: ಜಿ.ಕೆ. ವೆಂಕಟೇಶ್
ಕವಿ:  ಆರ್.ಎನ್. ಜಯಗೋಪಾಲ್
ವರ್ಷ: 1972
ಹಾಡುಗಾರರು: ಡಾ|| ಪಿ.ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ವಜ್ರಮುನಿ, ದ್ವಾರಕೀಶ್, ಲೋಕನಾಥ್
ಚಿತ್ರದ ನಿರ್ದೇಶಕರು: ಸಿದ್ಧಲಿಂಗಯ್ಯ
ನಿರ್ಮಾಪಕರು: ಶ್ರೀನಿಧಿ ನಿರ್ಮಾಣ 

ಹಾಡು ಕೇಳಿ...

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಆಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ   ||ಪ||


ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು ||ಅ.ಪ||

ಕೆತ್ತಲಾದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ
ಆಗುತ್ತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು ||೧||

ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಅಹ ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು ||೨||

ಕೈಕೆಸರಾದೆರೆ ಬಾಯ್ಮೊಸರೆಂಬ ಹಿರಿಯರ
ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನಂಬಿ ಬದುಕು
ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು ||೩||


Agadu Endu Kaikatti Kulitare, Bangarada Manushya, G.K. Venkatesh, R.N. Jayagopal, 1972, P.B. Srinivas, Dr. Rajkumar, Bharathi, Balakrishna, Lokanath, Srinath, Vajramuni, Dwarakish

ಬಂಗಾರದ ಮನುಷ್ಯ : ನಗುನಗುತಾ ನಲಿ ನಲಿ : Nagunaguta Nali Nali

ಹಾಡು: ನಗುನಗುತಾ ನಲಿ ನಲಿ
ಚಲನಚಿತ್ರ: ಬಂಗಾರದ ಮನುಷ್ಯ
ಸಂಗೀತ ನಿರ್ದೇಶಕರು: ಜಿ. ಕೆ. ವೆಂಕಟೇಶ್
ಕವಿ: ಹುಣಸೂರು ಕೃಷ್ಣಮೂರ್ತಿ
ವರ್ಷ: 1972
ಹಾಡುಗಾರರು: ಡಾ|| ಪಿ.ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ವಜ್ರಮುನಿ, ದ್ವಾರಕೀಶ್, ಲೋಕನಾಥ್
ಚಿತ್ರದ ನಿರ್ದೇಶಕರು: ಸಿದ್ಧಲಿಂಗಯ್ಯ
ನಿರ್ಮಾಪಕರು: ಶ್ರೀನಿಧಿ ನಿರ್ಮಾಣ

ಹಾಡು ಕೇಳಿ...

ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ, ಏನೇ ಆಗಲಿ ||ಪ||

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲೂ ರಸದೌತಣ ನಿನಗೆಲ್ಲೆಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ  ||೧||

ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳದಾಗ ||೨||

ಗೆಳಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವದು
ಮುಂದೆ ಯೌವನ ಮದುವೆ ಬಂಧನ
ಎಲ್ಲೆಲು ಹೊಸ ಜೀವನ ಅಹ ಎಲ್ಲೆಲು ಹೊಸ ಜೀವನ
ಜೊತೆಯದು ದೊರೆತಾಗ
ಮೈಮನ ಮರೆತಾಗ  ||೩||

ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿನೋಡ ||೪||

Nagunaguta Nali Nali, Bangarada Manushya, G.K. Venkatesh, Hunasuru Krishnamurthy, 1972, P.B. Srinivas, Dr. Rajkumar, Bharathi, Balakrishna, Lokanath, Srinath, Vajramuni, Dwarakish

ಗುರುವಾರ, ಆಗಸ್ಟ್ 29, 2013

ಚಿನ್ನದ ಗೊಂಬೆ : ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ : Sevantige Chendinantha

ಹಾಡು: ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ಚಲನಚಿತ್ರ: ಚಿನ್ನದ ಗೊಂಬೆ
ಸಂಗೀತ ನಿರ್ದೇಶಕರು: ಟಿ.ಜಿ. ಲಿಂಗಪ್ಪ
ಕವಿ: ವಿಜಯನಾರಸಿಂಹ
ವರ್ಷ: 1962
ಹಾಡುಗಾರರು: ಸುಮಂಗಲಂ ರಾಜಲಕ್ಷ್ಮಿ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಬಿ.ಆರ್. ಪಂತುಲು, ಜಯಲಲಿತ, ಕಲ್ಪನ, ನರಸಿಂಹರಾಜು
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು
ನಿರ್ಮಾಪಕರು: ಪದ್ಮಿನಿ ಚಿತ್ರ 

ಹಾಡು ಕೇಳಿ...

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ      ||ಪ||


ಅಮ್ಮನಿತ್ತದೀ ಅಮೃತ ಎನುವ ಕೋಳಿ
ಒಳ್ಳೆ ನಲ್ಮೆಯಿಂದ ಬೀಡು ಬಿಟ್ಟ ಮುದ್ದು ಕೋಳಿ        ||ಅ.ಪ||


ತಾಯಿ ಬಿಟ್ಟು ಘಳಿಗೆ ಕೂಡ ಅಗಲಲಾರದು
ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು
ಜಾಣ ಮರಿ ಮುದ್ದು ಕೋಳಿ ಮಾತನಾಡದು
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು        ||೧||


ಪ್ರೇಮವಿರುವ ಮನೆಯದುವೆ ನಿತ್ಯ ಸುಂದರ
ಆ ಪ್ರೇಮಭರಿತ ಹೃದಯವದು ದೇವ ಮಂದಿರ
ದೇವನವನೆ ಪ್ರೇಮರೂಪ ದಯಾಸಾಗರ
ಆ ದೈವರಕ್ಷೆ ಕಾವುದೆಲ್ಲ ಪ್ರೇಮಜೀವರ                  ||೨||


Sevantige Chendinantha, Chinnada Gombe, T.G. Lingappa, Vijayanarasimha, 1964, Sumangalam Rajalakshmi, Kalyan Kumar, B.R. Pantulu, Padmini Pictures

ನಮಸ್ತೆ

ನಮಸ್ತೆ. ಕನ್ನಡದ ಅನೇಕಾನೇಕ ಸಾತ್ವಿಕ ಚಿತ್ರಗೀತೆಗಳು ಸಂಗೀತಪ್ರಿಯರನ್ನು ಹತ್ತಾರು ವರ್ಷಗಳಿಂದ ರಂಜಿಸುತ್ತಾ ಭಾವನೆಗಳನ್ನು ಅರಳಿಸುತ್ತಿವೆ. ಅಂತಹ ಗೀತೆಗಳನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಿಮಗೆ ಸೂಕ್ತವೆನಿಸಿದ ಹಾಡುಗಳನ್ನು ನನ್ನ ಪ್ರೊಫೈಲ್‍ನಲ್ಲಿ ದೊರಕುವ ಈಮೈಲ್‍ ಮೂಲಕ ಕಳುಹಿಸಿಕೊಡಿ.